Official Website of SRS Matha https://srsmatha.org
About Rayaru
https://srsmatha.org/rayarustory.php
About Rayaru Literary works
https://srsmatha.org/rayaruworks.php
ಶ್ರೀರಾಘವೇಂದ್ರತೀರ್ಥರು ಕ್ರಿ.ಶ. 1596ರಲ್ಲಿ ಅವತರಿಸಿ 76ವರ್ಷ ಮನುಷ್ಯ ದೃಷ್ಟಿಗೋಚರರಾಗಿದ್ದು, ಕ್ರಿ.ಶ. 1671ರಲ್ಲಿ ತುಂಗಭದ್ರೆಯ ಪಾವನತರಂಗಗಳಿಂದ ಶೀತಲವಾಗಿರುವ ದಕ್ಷಿಣಭಾರತದ ಮಂಗಲಕರ ಪ್ರದೇಶವಾಗಿರುವ ಮಂತ್ರಾಲಯದಲ್ಲಿ ಭೌತಿಕ ಶರೀರವನ್ನು ಬಿಡದೆ (ಸಶರೀರಾಗಿಯೇ) ವೃಂದಾವನವನ್ನು ಪ್ರವೇಶಿಸಿದ್ದಾರೆ,
ಎಂಬ ವಿಷಯವು ಎಲ್ಲರಿಗೂ ತಿಳಿದುದೇ ಆಗಿದೆ.
ಅದುಃಖಮಿತರತ್ ಸರ್ವ೦ ಜೀವಾ ಏವ ತು ದುಃಖಿನಃ |
ತೇಷಾಂ ದುಃಖಪ್ರಹಾಣಾಯ ಕೃತಿರೇಷಾ ಪ್ರವರ್ತತೇ ||
ಎಂಬ ವೈದಿಕ ವಾಹ್ಮಯದ ಮಹತ್ವವನ್ನು ಸಾರುವ ಈ ಮಾತು ಜೀವಸಂಘಕ್ಕೆ ದುಃಖವು ಇರುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಅಂತಹ ಜೀವಿಗಳಾದ ನಾವು ಮಾನುಷಜನ್ಮವನ್ನು ಎತ್ತಿದ ಮೇಲೆ ಜ್ಞಾನೇಚ್ಛಾಕ್ರಿಯೆಗಳು ಇರುವುದರಿಂದ ದುಃಖವನ್ನು ಕಳೆದುಕೊಳ್ಳಲು ಪ್ರಯತ್ನಿಸಬೇಕು. ಇದಕ್ಕಾಗಿ ವಿಷಯಗಳಲ್ಲಿ ವಿರಕ್ತರಾಗಿ ಭಗವದ್ವಿಷಯಕವಾದ ಜ್ಞಾನವನ್ನು ಪಡೆದು ಅವನನ್ನೇ ಸರ್ವೋತ್ತಮನೆಂದು ತಿಳಿದು ಉಪಾಸನೆ ಮಾಡಿದಾಗ ಶ್ರೀಹರಿಯು ಪ್ರಸನ್ನನಾಗಿ ಮೋಕ್ಷಾದಿ ಪುರುಷಾರ್ಥವನ್ನು ಕರುಣಿಸುತ್ತಾನೆ. ಭಗವಂತನ ಅನುಗ್ರಹವಾಗಬೇಕಾದರೆ ಗುರುಕರುಣೆಯು ಅತಿ ಮುಖ್ಯವಾಗಿದೆ. ಅದಕ್ಕಾಗಿಯೇ
”ಹರೌ ರುಷ್ಟೇ ಗುರುಸ್ಮಾತಾ ಗುರೌ ರುಷ್ಟೇ ನ ಕನ ಎಂಬ ಮಾತು. ಒಂದು ವೇಳೆ ಹರಿಯು ನಮ್ಮ ಮೇಲೆ ಕೋಪಗೊಂಡರೆ ಗುರುಗಳು ಭಗವಂತನಲ್ಲಿ ಪ್ರಾರ್ಥಿಸಿ ಅವನ ಅನುಗ್ರಹವಾಗುವಂತೆ ಮಾಡುತ್ತಾರೆ. ಆದರೆ ಗುರುಗಳೇ ಕೋಪಗೊಂಡರೆ ಇನ್ಯಾರೂ ಕಾಪಾಡುವವರು ಇರುವುದಿಲ್ಲ. ಆದ್ದರಿಂದ ಭಗವಂತನಾದರೂ “ಗುರುದ್ವಾರಾ ಪ್ರಸಾದಕೃದಹಂ” ಎಂಬ ವಾಕ್ಯದ ಮೂಲಕ ಗುರುಕಾರುಣ್ಯದ ಮಹತ್ವವನ್ನು ಸಾರಿದ್ದಾನೆ.
ಶ್ರೀರಾಘವೇಂದ್ರರತ್ನಾನಾಂ ರಸನಾರಂಗನರ್ತಕೀ ।
ಶಬ್ದಾಂಬುಧಿಶರಜ್ಯೋತ್ಸಾಶರಣಂ ಮಮ ಶಾರದಾ ||
ಶ್ರೇಷ್ಠರಾದ ಶ್ರೀರಾಘವೇಂದ್ರತೀರ್ಥರ ನಾಲಿಗೆಯು ಸರಸ್ವತೀದೇವಿಯು (ಭಾರತೀ
ದೇವಿಯ) ನಾಟ್ಯವಾಡುವ ರಂಗಸ್ಥಳದಂತಿದೆ. ಅವರು ಮಾಡುವ ಪ್ರವಚನ ಮತ್ತು ಟೀಕಾ ಟಿಪ್ಪಣ್ಯಾದಿಗಳ ವ್ಯಾಜದಿಂದ ಭಾರತಿಯು ಅಲ್ಲಿ ಒಳ್ಳೆಯ ಶಬ್ದಸಂಪತ್ತಿನಿಂದ ವಿಹರಿಸುತ್ತಾಳೆ. ಶರತ್ಕಾಲದ ಬೆಳದಿಂಗಳು ಸಮುದ್ರ ವನ್ನು ಉಕ್ಕೇರಿಸುವಂತೆ ಸರಸ್ವತೀದೇವಿಯೂ (ಭಾರತೀದೇವಿಯೂ) ಅಲೆ ಅಲೆಯಾಗಿ ಒಳ್ಳೆಯ ಶಬ್ದಗಳ ಸ್ಫೂರ್ತಿಯನ್ನು ನನಗೆ ಕೊಡಲಿ.
ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದಪಂಕಜೇ |
ಕಾಮಿತಾಶೇಷಕಲ್ಯಾಣಕಲನಾಕಲ್ಪಪಾದಪೌ ||
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಜ್ಞಾನ, ಭಕ್ತಿ, ವೈರಾಗ್ಯ, ಮುಂತಾದ ಕಲ್ಯಾಣಗುಣಶಾಲಿಗಳು, ಅರಳಿದ ತಾವರೆ ಹೂವುಗಳಂತಿರುವ ಅವರ ಪಾದದ್ವಯವು ಭಕ್ತರು ಅಪೇಕ್ಷಿಸಿದ ಪೂರ್ಣವಾದ ಫಲಗಳನ್ನು ಕೊಡುವುದರಲ್ಲಿ ಕಲ್ಪವೃಕ್ಷಗಳಿಗೆ ಸಮಾನವಾಗಿದೆ. ನಾನು ಅಂತಹ ಚರಣ- ಕಮಲಗಳನ್ನು ಭಕ್ತತಿಶಯದಿಂದ ನಮಿಸುತ್ತೇನೆ. (ಭಜತಾಂ ಕಲ್ಪವೃಕ್ಷಾಯ ಎಂದು ಹೇಳಿರುವಂತೆ ಅವರು ಭಕ್ತರಿಗೆ ಕಲ್ಪವೃಕ್ಷದಂತೆ ಅಭೀಷ್ಟಪ್ರದರು ಎಂಬುದು ಭಕ್ತರಿಗೆ ಅನುಭವಸಿದ್ಧವಾಗಿದೆ.)
ಸಂತಂ ಶ್ರೀರಮಣಪ್ರಿಯಂ ಯತಿವರಂ ವ್ಯಾಸಸ್ಯ ಭಾವೇ ದೃಶಂ
ದುರ್ವಾರಾಮಿತಮಾಯಿಭಿಕ್ಷುತಿಮಿರೇ ಪರ್ವಸ್ಥಚಂದ್ರಂ ಭುವಿ |
ಸತ್ಸಂಘಸ್ತುತಮಿಷ್ಟದಕ್ಷಿತಿರುಹಂ ವಂದಾರುವಿಪ್ರಪ್ರಿಯಂ
ತಂ ನತ್ವಾಸಕಲೋ ದುರೂಹಸುದೃಶಂ ಸಂಯಾತಿ ವಿದ್ಯಾದಿಕಮ್ ||
ಶ್ರೀರಾಘವೇಂದ್ರಗುರುಸಾರ್ವಭೌಮರು ಸಕಲ ವಾಜನಸ ಯಾದ ಲಕ್ಷ್ಮೀದೇವಿಯ ರಮಣನ ಅತಿಶಯವಾದ ಪ್ರೀತಿಗೆ ಪಾತ್ರರು. ಯಾವಾಗಲೂ ಶ್ರೀವೇದವ್ಯಾಸರ ಧ್ಯಾನವನ್ನು ಮಾಡುತ್ತಾ, ಅವರಿಗೆ ಅಭಿಮತವಾದ ಗೀತಾ, ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಅರ್ಥವನ್ನು ಶಿಷ್ಯರಿಗೆ ಉಪದೇಶಿಸುತ್ತಾ, ಗ್ರಂಥಗಳನ್ನು ರಚಿಸುತ್ತಾ ಇರುತ್ತಾರೆ. ಇಂದು ಭೂಲೋಕದಲ್ಲಿರುವ ಯತಿಗಳಲ್ಲಿ ಇವರು ಶ್ರೇಷ್ಠರು. ಭೂಲೋಕದಲ್ಲಿ ಜಯಿಸಲು ಸಾಧ್ಯವಿಲ್ಲದ ಅಸಂಖ್ಯಾಕರಾದ ಮಾಯಾವಾದಿ ಸಂನ್ಯಾಸಿಗಳೆಂಬ ಕತ್ತಲೆಯನ್ನು ನಿವಾರಣೆ ಮಾಡುತ್ತಿವೆ.
ಅವರು ಭಜಿಸುವವರಿಗೆ ಕಲ್ಪವೃಕ್ಷದಂತಿದ್ದಾರೆ. (ಭಜತಾಂ ಕಲ್ಪವೃಕ್ಷಾಯ) ನಿರಂತರ ಅವರಿಗೆ ತಲೆಬಾಗಿ ನಮಸ್ಕರಿಸಿ ಸ್ತುತಿಸುವರಿಗೆ ವಿಶಿಷ್ಟವಾದ ಐಶ್ವರ್ಯವನ್ನು ಅವರು ನೀಡುತ್ತಾರೆ. ಅವರಿಗೆ ಬಾಗಿದ, ಅವರನ್ನು ಸ್ತೋತ್ರಮಾಡಿದ ಜನರೆಲ್ಲರೂ ಊಹಿಸಲೂ ಸಾಧ್ಯವಿಲ್ಲದ, ಬಾಯಿಯಿಂದ ವರ್ಣಿಸಲೂ ಸಾಧ್ಯವಿಲ್ಲದ ಉತ್ತಮವಾದ ಆಧ್ಯಾತ್ಮಿಕ ಜ್ಞಾನವನ್ನು ಪಡೆಯುತ್ತಾರೆ. ಶ್ರೇಷ್ಠವಾದ ವಿದ್ಯೆ, ಸಂಪತ್ತು, ಸಂಗೀತ, ಶಿಲ್ಪಾದಿಜ್ಞಾನ, ಸಂತಾನ ಮುಂತಾದ ಸಕಲೇಷಾರ್ಥಗಳೂ ಸಿದ್ಧಿಸುತ್ತವೆ.
ರಾಯರು ಎಂದರೆ ಪರಿಮಳ. ಪರಿಮಳ ಎಂದರೆ ರಾಯರು. ಆದ್ದರಿಂದಲೇ ‘ಪರಿಮಳಾಚಾರ್ಯರು‘ ಎಂಬ ಬಿರುದು ಪಡೆದಿರುವರು.